Christmas is round the corner and everyone is busy with Christmas decorations. Christmas ornaments, wallpapers, goodies, gifts, food etc, is all what everyone can think of. Christmas decoration is incomplete without the colours red, green and gold. These Colours of Christmas are symbolically attached to the festival and each one of them hold a deep meaning.
ಕ್ರಿಸ್ಮಸ್ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ಎಲ್ಲರ ಮನೆಗಳಲ್ಲೂ ಹಬ್ಬದ ತಯಾರಿಯನ್ನು ಬಹು ವಿಜೃಂಭಣೆಯಿಂದ ಮಾಡುತ್ತಿರುತ್ತಾರೆ. ಕ್ರಿಸ್ಮಸ್ ಮರದ ಅಲಂಕಾರ, ಮನೆಗಳನ್ನು ವಿದ್ಯುದ್ದೀಪದಿಂದ ಅಲಂಕರಿಸುವುದು, ಉಡುಗೊರೆಗಳ ಖರೀದಿ ಹೀಗೆ ಹಬ್ಬಕ್ಕಾಗಿ ಸಂಭ್ರಮಾಚರಣೆಗಳು ಮುಗಿಲು ಮುಟ್ಟುತ್ತಿರುತ್ತದೆ.ಆದರೆ ಕ್ರಿಸ್ಮಸ್ ಆಚರಣೆಯಲ್ಲಿ ಬಣ್ಣಗಳ ಮಹತ್ವವನ್ನು ಅರಿತಿದ್ದೀರಾ? ಕೆಲವೊಂದು ಬಣ್ಣಗಳಿಲ್ಲದೆ ಕ್ರಿಸ್ಮಸ್ ಆಚರಣೆ ಕಳೆಗಟ್ಟುವುದೇ ಇಲ್ಲ. ಆ ಬಣ್ಣಗಳೇ ಕೆಂಪು, ಹಸಿರು ಮತ್ತು ಚಿನ್ನದ ಬಣ್ಣವಾಗಿವೆ. ಕ್ರಿಸ್ಮಸ್ ಆಚರಣೆಯೊಂದಿಗೆ ಈ ಬಣ್ಣಗಳು ಅವಿನಾಭಾವ ಸಂಬಂಧವನ್ನು ಪಡೆದುಕೊಂಡಿದ್ದು ಕ್ರಿಸ್ತನು ಹೇಳಿರುವ ಮೂರು ಪಾಠಗಳ ಪರಿಚಯವನ್ನು ಇದು ಮಾಡಿಕೊಡುತ್ತದೆ. ಬನ್ನಿ ಹಾಗಿದ್ದರೆ ಈ ಬಣ್ಣಗಳ ವಿಶೇಷತೆಯೇನು ಎಂಬುದನ್ನು ಅರಿತುಕೊಳ್ಳೋಣ...ಕ್ರಿಸ್ತನನ್ನು ಶಿಲುಬೆಗೇರಿಸುವುದನ್ನು ಪ್ರತಿನಿಧಿಸುವ ಬಣ್ಣ ಕೆಂಪಾಗಿದೆ. ಪ್ರೇಮದ ಪಾಠವನ್ನು ಕ್ರಿಸ್ತನು ಜಗತ್ತಿಗೆ ಸಾರಿರುವುದನ್ನು ಕೆಂಪು ಬಣ್ಣವು ತಿಳಿಸುತ್ತದೆ. ದೇವರ ಪ್ರೀತಿ ಅಪ್ಯಾಯಮಾನವಾಗಿರುತ್ತದೆ ಮತ್ತು ಇದಕ್ಕೆ ಪರಿಧಿ ಇರುವುದಿಲ್ಲ. ಅವರು ತಮ್ಮ ಮಗನನ್ನು ಭೂಮಿಗೆ ಕಳುಹಿಸಿದ್ದೇ ಮಾನವರನ್ನು ಪ್ರೀತಿಯಿಂದ ಬಂಧಿಸಿ ಸನ್ಮಾರ್ಗದಲ್ಲಿ ನಡೆಯುವಂತೆ ಮಾಡಲಾಗಿದೆ.